Sojugada Sooju Mallige Lyrics in Kannada – Ananya Bhat
Sojugada Sooju Mallige Lyrics in Kannada
ಮಾದೇವ ಮಾದೇವ ಮಾದೇವ ಮಾದೇವ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ್ ಪೂಜೆಗೆ ಬಂದು ಮಾದೇವ ನಿಮ್ಮ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ತಪ್ಪಾಲೆ ಬೆಳಗಿವ್ನಿ ತುಪ್ಪಾವ ಕಾಯ್ಸಿವ್ನಿ
ಕಿತ್ತಾಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದಿವ್ನಿ ಮಾದಪ್ಪ
ಕಿತ್ತಾಡಿ ಬರುವ ಪರಸೆಗೆ ಮಾದೇವ ನಿಮ್ಮ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಬೆಟ್ ಹತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ?
ಬೆಟ್ಟದ್ ಮಾದೇವ ಗತಿಯೆಂದು ಮಾದೇವ ನೀವೇ
ಬೆಟ್ಟದ್ ಮಾದೇವ ಗತಿಯೆಂದು ಅವರಿನ್ನು
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಉಚ್ಚೆಳ್ಳು ಹೂವ್ನಂಗೆ ಹೆಚ್ಚೇವೋ ನಿನ್ನ ಪರುಸೆ
ಹೆಚ್ಚಾಳಗಾರ ಮಾದಯ್ಯ, ಮಾದಯ್ಯ ನೀನೇ
ಹೆಚ್ಚಾಳಗಾರ ಮಾದಯ್ಯ ಏಳುಮಲೆಯ
ಹೆಚ್ಚೇವು ಕೌದಳ್ಳಿ ಕಣಿವೇಲಿ ಮಾದೇವ ನಿಮ್ಮ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ಮಾದೇವ ಮಾದೇವ ಮಾದೇವ
(ಸೋಜುಗಾದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ)
Sojugada Sooju Mallige Song Credits
Song | Sojugada Sooju Mallige |
Movie | Ananya Bhat (2020) |
Cast | Ananya Bhat, Sadhguru |
Lyrics | Folk Artists |
Singer(s) | Ananya Bhat |
Music | Live Performance |
Label | Sounds of Isha |